೧೯೫೯ರ ಸಹಕಾರಿ ಕಾಯ್ದೆಯಡಿ ನೋಂದಣೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೂ ೧೯೯೭ರ ಸೌಹಾರ್ದ ಕಾಯ್ದೆಯಡಿ ನೋಂದಣೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೂ ಇರುವ ವ್ಯತ್ಯಾಸಗಳು :
ಕ್ರ.ಸಂ. |
ಕಾರ್ಯಗಳು |
೧೯೫೯ರ ಕಾಯ್ದೆಯಲ್ಲಿ |
೧೯೯೭ರ ಕಾಯ್ದೆಯಲ್ಲಿ |
೦೧. |
ಉಪವಿಧಿಗಳ ತಿದ್ದುಪಡಿ |
ಕಾಯ್ದೆಯಲ್ಲಿ ಸಾಮಾನ್ಯ ಸಭೆಯ ನಿರ್ಣಯದಂತೆ ಅಥವಾ ನಿಬಂಧಕರು ಸ್ವಯಂ ನಿರ್ಧಾರದಿಂದ ನೇರವಾಗಿ ಉಪವಿಧಿಗಳ ತಿದ್ದುಪಡಿ ಮಾಡಿ ಆದೇಶ ನೀಡಲು ಅವಕಾಶ ಇರುತ್ತದೆ. |
ಉಪವಿಧಿ ತಿದ್ದುಪಡಿಯನ್ನು ಸಹಕಾರಿಯ ಕ್ರಿಯಾಶೀಲ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದ ನಂತರ ನಿಬಂಧಕರು ತಿದ್ದುಪಡಿ ಮಾಡಿ ಆದೇಶ ಹೊರಡಿಸಬಹುದು. ನಿಬಂಧಕರು ಸ್ವಯಂ ನಿರ್ಧಾರದಿಂದ ನೇರವಾಗಿ ಉಪವಿಧಿಗಳ ತಿದ್ದುಪಡಿ ಮಾಡಿ ಆದೇಶ ನೀಡಲು ಅವಕಾಶ ಇರುವುದಿಲ್ಲ. |
೦೨. |
ಆಡಳಿತ ಮಂಡಳಿಯ ರದ್ದತಿ |
ಸಹಕಾರಿಯ ಆಡಳಿತ ಮಂಡಳಿಯನ್ನು ರದ್ದುಗೊಳಿಸುವ ಅಧಿಕಾರವನ್ನು ನಿಬಂಧಕರಿಗೆ ನೀಡಲಾಗಿದೆ. |
ಸಹಕಾರಿಯ ಆಡಳಿತ ಮಂಡಳಿಯನ್ನು ಸಂಯುಕ್ತ ಸಹಕಾರಿಯು ಮಾತ್ರ ರದ್ದುಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ. |
೦೩. |
ಆಡಳಿತ ಮಂಡಳಿ ಚುನಾವಣೆ |
ಸುಸ್ತಿದಾರರಲ್ಲದ ಎಲ್ಲ ಸದಸ್ಯರಿಂದ ಆಡಳಿತ ಮಂಡಳಿಯ ಆಯ್ಕೆ ನಡೆಯುತ್ತದೆ. ಸಹಕಾರಿಯ ದೈನಂದಿನ ಕಾರ್ಯಚಟುವಟಿಕೆಗಳ ಅಥವಾ ಬೆಳವಣಿಗೆಯ ಮಾಹಿತಿ ಇರದ ಸದಸ್ಯ ಕೂಡ ಮತದಾನದಲ್ಲಿ ಭಾಗವಹಿಸಬಹುದು. |
ಜವಾಬ್ದಾರಿಯುತ ಕ್ರಿಯಾಶೀಲ ಸದಸ್ಯತ್ವ ಈ ಕಾಯ್ದೆಯ ವೈಶಿಷ್ಟ್ಯ. ಕನಿಷ್ಠ ವ್ಯವಹಾರ ಮಾಡದ, ಸಾಮಾನ್ಯ ಸಭೆಯಲ್ಲಿ ಭಾಗವಹಿಸದ ಸದಸ್ಯರು ಮುತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅಂದರೆ ಸೌಹಾರ್ದ ಸಹಕಾರಿಯ ಕಾರ್ಯಚಟುವಟಿಕೆಗಳೆಡೆಗೆ ಸದಸ್ಯರು ಗಮನಹರಿಸುವ ಅವಕಾಶವನ್ನು ಒದಗಿಸಲಾಗಿದೆ. |
೦೪. |
ಮೇಲ್ವಿಚಾರಣೆ, ಉಸ್ತುವಾರಿ, ನಿಯಂತ್ರಣ |
ಸಹಕಾರಿಯ ಎಲ್ಲ ಮೇಲ್ವಿಚಾರಣೆ, ಉಸ್ತುವಾರಿ ಹಾಗೂ ನಿಯಂತ್ರಣ ಕಾರ್ಯವನ್ನು ನಿಬಂಧಕರು ಮಾಡುತ್ತಾರೆ. |
ಸೌಹಾರ್ದ ಸಹಕಾರಿಗಳ ಮೇಲ್ವಿಚಾರಣೆ, ಉಸ್ತುವಾರಿ ಹಾಗೂ ನಿಯಂತ್ರಣದ ಅಧಿಕಾರವನ್ನು ಈ ಕಾಯ್ದೆಯಲ್ಲಿ ಸದಸ್ಯ ಸಹಕಾರಿಗಳಿಂದಲೇ ರಚಿತವಾದ ಸಂಯುಕ್ತ ಸಹಕಾರಿಗೆ ಒದಗಿಸಲಾಗಿದೆ. |
೦೫. |
ಲೆಕ್ಕರಿಶೋಧನೆ |
ಈ ಕಾಯ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿಗಳ ಲೆಕ್ಕಪರಿಶೋಧನೆಯನ್ನು ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಯಿಂದ ನಡೆಸಲಾಗುತ್ತದೆ. ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಯಲ್ಲಿನ ಲೆಕ್ಕಪರಿಶೋಧಕರ ನೇಮಕಾತಿಯನ್ನು ಸಹಕಾರಿ ಇಲಾಖೆ ಅಂದರೆ ಸಂಬಂಧಿಸಿದ ನಿಬಂಧಕರು ಮಾಡುತ್ತಾರೆ. |
ಸಂಯುಕ್ತ ಸಹಕಾರಿಯು ಲೆಕ್ಕಪರಿಶೋಧಕರ ಪಟ್ಟಿಯನ್ನು ತಯಾರಿಸಿದ್ದು ಆ ಪಟ್ಟಿಯಲ್ಲಿರುವ ಯಾವುದೇ ಲೆಕ್ಕಪರಿಶೋಧಕರನ್ನು ಸೌಹಾರ್ದ ಸಹಕಾರಿಗಳು ತಮ್ಮ ಸಾಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧನೆಗಾಗಿ ನೇಮಿಸಿಕೊಳ್ಳಬಹುದಾದ ಸ್ವಾತಂತ್ರ್ಯವನ್ನು ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ಸೌಹಾರ್ದ ಸಹಕಾರಿಗಳು ಲೆಕ್ಕಪರಿಶೋಧನೆಯನ್ನು ಮಾಡಿಸದಿದ್ದಲ್ಲಿ ಸಂಯುಕ್ತ ಸಹಕಾರಿಯು ಲೆಕ್ಕಪರಿಶೋಧಕರನ್ನು ನೇಮಿಸುವ ಅಧಿಕಾರವನ್ನು ಹೊಂದಿರುತ್ತದೆ. |
೦೬. |
ಸಾಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕರ ಉಪಸ್ಥಿತಿ |
ಸಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕರ ಹಾಜರಾತಿ ಅನಿವಾರ್ಕಿರುತ್ತದೆ. |
ಸಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕರು ಕಡ್ಡಾಯವಾಗಿ ಉಪಸ್ಥಿತರಿರಬೇಕಿರುತ್ತದೆ. ಅಗತ್ಯವಿದ್ದಲ್ಲಿ ಅಥವಾ ಸದಸ್ಯರು ಬಯಸಿದಲ್ಲಿ ಸದಸ್ಯರ ಪ್ರಶ್ನೆಗೆ ಲೆಕ್ಕಪರಿಶೋಧಕರು ಉತ್ತರಿಸಬೇಕಾಗುತ್ತದೆ. |
೦೭. |
ಸದಸ್ಯತ್ವ |
ಸದಸ್ಯತ್ವದ ವಿಷಯಲ್ಲಿ ನಿಬಂಧಕರು ನಿರ್ದೇಶನ ನೀಡಲು ಅವಕಾಶ ನೀಡಲಾಗಿದೆ. |
ಮುಕ್ತ ಸದಸ್ಯತ್ವದ ಅವಕಾಶ ಒದಗಿಸಲಾಗಿದೆ. ಸದಸ್ಯತ್ವದ ವಿಷಯದಲ್ಲಿ ನಿಬಂಧಕರು ಅಥವಾ ಸಂಯುಕ್ತ ಸಹಕಾರಿ ನಿರ್ದೇಶನ ನೀಡಲು ಅವಕಾಶವಿರುವುದಿಲ್ಲ. ಸಹಕಾರಿಯ ಆಡಳಿತ ಮಂಡಳಿಯು ಸದಸ್ಯತ್ವದ ಕುರಿತು ನಿರ್ಣಯ ತೆಗೆದುಕೊಳ್ಳಬೇಕಿರುತ್ತದೆ. ಸದಸ್ಯತ್ವದ ಕುರಿತು ಯಾವುದೇ ಮೇಲ್ಮನವಿಯಿದ್ದಲ್ಲಿ ಸಾಮಾನ್ಯ ಸಭೆಯು ತೀರ್ಮಾನಿಸಬಹುದಾಗಿರುತ್ತದೆ. |
೦೮. |
ಸದಸ್ಯರ ಕರ್ತವ್ಯ |
ಈ ಕಾಯ್ದೆಯಲ್ಲಿ ಸದಸ್ಯರ ಕರ್ತವ್ಯಗಳ ಉಲ್ಲೇಖವಿರುಗಿದೆ. |
ಈ ಕಾಯ್ದೆಯಲ್ಲಿ ಸದಸ್ಯರಿಗೆ ಶಾಸನಬದ್ಧ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಸದಸ್ಯರು ಸೌಹಾರ್ದ ಸಹಕಾರಿಯೊಂದಿಗೆ ಕನಿಷ್ಠ ವ್ಯವಹಾರ ಮಾಡದಿದ್ದಲ್ಲಿ ಹಾಗೂ ಸತತ ಮೂರು ಸಾಮಾನ್ಯ ಸಭೆಯಲ್ಲಿ ಗೈರುಹಾಜರಾಗುವುದರ ಮೂಲಕ ಶಾಸನಬದ್ಧ ಕರ್ತವ್ಯ ನಿರ್ವಹಿಸದಿದ್ದಲ್ಲಿ ಸದಸ್ಯತ್ವದಿಂದ ಅನರ್ಹಗೊಳಿಸಬಹುದಾಗಿರುತ್ತದೆ. |
೦೯. |
ವಿಚಾರಣೆ ಮತ್ತು ತನಿಖೆ |
ವಿಚಾರಣೆ ಮತ್ತು ತನಿಖೆಯ ಅಧಿಕಾರ ನಿಬಂಧಕರಿಗೆ ನೀಡಲಾಗಿದೆ. ನಿಬಂಧಕರು ಬಯಸಿದಲ್ಲಿ ಸ್ವಯಂಪ್ರೇರಿತ ವಿಚಾರಣೆ ಮತ್ತು ತನಿಖೆಯನ್ನು ನಡೆಸಬಹುದಾಗಿರುತ್ತದೆ. |
ಆಡಳಿತ ಮಂಡಳಿಯು ೧/೩ ಸದಸ್ಯರ ಕೋರಿಕೆಯ ಮೇರೆಗೆ ಅಥವಾ ಸಹಕಾರಿಯ ೧/೧೦ ಸದಸ್ಯರ ಕೋರಿಕೆಯ ಮೇರಿಗೆ ಮಾತ್ರ ನಿಬಂಧಕರು ವಿಚಾರಣೆ ಮತ್ತು ತನಿಖೆಯನ್ನು ನಡೆಸಬಹುದಾಗಿರುತ್ತದೆ. ನಿಬಂಧಕರು ಸ್ವಯಂಪ್ರೇರಿತ ವಿಚಾರಣೆ ನಡೆಸುವಂತಿಲ್ಲ. |
೧೦. |
ಆಸ್ತಿ ಖರೀದಿ ಅಥವಾ ವಿಲೇವಾರಿ |
ಸಹಕಾರಿಯು ಯಾವುದೇ ಆಸ್ತಿ ಖರೀದಿಸಬೇಕಿದ್ದಲ್ಲಿ ಅಥವಾ ವಿಲೇವಾರಿ ಮಾಡಬೇಕಿದ್ದಲ್ಲಿ ನಿಬಂಧಕರ ಅನುಮತಿ ಅಗತ್ಯ. |
ಸೌಹಾರ್ದ ಸಹಕಾರಿಗಳು ಆಸ್ತಿ ಖರೀದಿ ಅಥವಾ ವಿಲೇವಾರಿ ಮಾಡಬೇಕಿದ್ದಲ್ಲಿ ಸಾಮಾನ್ಯ ಸಭೆಯ ಅನುಮೋದನೆ ಪಡೆದು ಮಾಡಬಹುದಾಗಿರುತ್ತದೆ. ನಿಬಂಧಕರ ಅನುಮತಿ ಪಡೆಯುವ ಅಗತ್ಯವಿಲ್ಲ. |
೧೧. |
ಚುನಾವಣೆಗಳು |
ಸರ್ಕಾರವು ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಬಹುದಾಗಿರುತ್ತದೆ. |
ಚುನಾವಣೆಯನ್ನು ನಿಗದಿತ ಸಮಯದೊಳಗೆ ನಡೆಸುವುದು ಕಡ್ಡಾಯ. ಚುನಾವಣೆಯನ್ನು ಮೂಂದೂಡಲು ಅವಕಾಶವಿರುವುದಿಲ್ಲ. |
೧೨. |
ನಿರ್ದೇಶನ ನೀಡುವ ಅಧಿಕಾರ |
ಸರ್ಕಾರ ಅಥವಾ ನಿಬಂಧಕರಿಗೆ ಸಹಕಾರಿಯ ಕಾರ್ಯಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಿ ನಿರ್ದೇಶನ ನೀಡುವ ಅಧಿಕಾರವಿರುತ್ತದೆ. |
ಸರ್ಕಾರ ಅಥವಾ ನಿಬಂಧಕರು ಸಹಕಾರಿಯ ಕಾರ್ಯಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಿ ನಿರ್ದೇಶನ ನೀಡುವಂತಿಲ್ಲ. ಕರ್ತವ್ಯ ಲೋಪ ಉಂಟಾಗಿದ್ದಲ್ಲಿ ಸಂಯುಕ್ತ ಸಹಕಾರಿಯು ನಿರ್ದೇಶನ ನೀಡಬಹುದಾಗಿರುತ್ತದೆ. |
೧೩. |
ಸಿಬ್ಬಂದಿಗಳ ವೃಂದಬಲ, ವೇತನ ಶ್ರೇಣಿ, ನೇಮಕಾತಿ, ಬಡ್ತಿ |
ಸರ್ವಸದಸ್ಯರ ಸಭೆಯ ಅನುಮೋದನೆಗೊಳಪಟ್ಟು ಆಡಳಿತ ಮಂಡಳಿ ನಿರ್ಧರಿಸುವುದರ ಜೊತೆಗೆ ನಿಬಂಧಕರ ಅನುಮೋದನೆಯನ್ನೂ ಕೂಡ ಪಡೆಯಬೇಕಿರುತ್ತದೆ. |
ಸರ್ವಸದಸ್ಯರ ಸಭೆಯ ಅನುಮೋದನೆಗೊಳಪಟ್ಟು ಆಡಳಿತ ಮಂಡಳಿ ನಿರ್ಧರಿಸುತ್ತದೆ. ನಿಬಂಧಕರ ಅನುಮತಿಯ ಅಗತ್ಯವಿರುವುದಿಲ್ಲ. |
೧೪. |
ಸರ್ಕಾರದ ನೆರವು ಹಾಗೂ ಹಸ್ತಕ್ಷೇಪ |
ಸರ್ಕಾರದ ನೆರವು ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ. ಹಾಗೆಯೇ ಸಹಕಾರಿಯ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೂ ಪೂರ್ಣ ಅವಕಾಶವಿರುತ್ತದೆ. |
ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣದ ಧ್ಯೇಯದೊಂದಿಗೆ ಜಾರಿಗೆ ಬಂದ ಈ ಕಾಯ್ದೆಯಲ್ಲಿ ಸರ್ಕಾರದ ನೆರವಿಗೆ ಹಾಗೂ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲ. |
೧೫. |
ಬ್ಯಾಂಕುಗಳೊಡನೆ ವ್ಯವಹಾರ. |
ಡಿಸಿಸಿ ಬ್ಯಾಂಕ್‌ಗಳೊಂದಿಗೆ ಮುಕ್ತ ವ್ಯವಹಾರಕ್ಕೆ ಅವಕಾಶವಿದ್ದು ಉಳಿದ ಯಾವುದೇ ಬ್ಯಾಂಕುಗಳೊಂದಿಗೆ ವ್ಯವಹಾರ ನಡೆಸಬೇಕಿದ್ದಲ್ಲಿ ನಿಬಂಧಕರ ಅನುಮತಿ ಪಡೆಯುವುದು ಕಡ್ಡಾಯ. |
ಯಾವುದೇ ಬ್ಯಾಂಕ್‌ಗಳೊಂದಿಗಿನ ವ್ಯವಹಾರಕ್ಕೆ ಮುಕ್ತ ಅವಕಾಶ ಒದಗಿಸಲಾಗಿದೆ. |
೧೬. |
ಪರಿವೀಕ್ಷಣೆ |
ಸಹಕಾರ ಸಂಸ್ಥೆಗಳ ಪರಿವೀಕ್ಷಣೆಯ ಅಧಿಕಾರವನ್ನು ಸಹಕಾರ ಇಲಾಖೆಗೆ ನೀಡಲಾಗಿದೆ. |
ಸೌಹಾರ್ದ ಸಹಕಾರಿಗಳ ಪರಿವೀಕ್ಷಣೆಯ ಅಧಿಕಾರವನ್ನು ಸಂಯುಕ್ತ ಸಹಕಾರಿಗೆ ನೀಡಲಾಗಿದೆ. |
೧೭. |
ಪೂರಕ ಸಂಸ್ಥೆ ಪ್ರಾರಂಭಿಸಲು ಅವಕಾಶ |
ಪೂರಕ ಸಂಸ್ಥೆ ಪ್ರಾರಂಭಿಸಲು ನಿಬಂಧಕರ ಅನುಮತಿಯ ಅಗತ್ಯವಿದೆ. |
ಪೂರಕ ಸಂಸ್ಥೆ ಪ್ರಾರಂಭಿಸಲು ನಿಬಂಧಕರ ಅನುಮತಿಯ ಅಗತ್ಯವಿರುವುದಿಲ್ಲ. ಸಾಮಾನ್ಯ ಸಭೆಯ ಅನುಮೋದನೆ ಸಾಕಿರುತ್ತದೆ. |
೧೮. |
ಒಕ್ಕೂಟ ಸಹಕಾರ ಪ್ರಾರಂಭಿಸಲು ಅವಕಾಶ |
ಈ ಕಾಯ್ದೆಯಲ್ಲಿ ಯಾವುದೇ ರೀತಿಯ ಒಕ್ಕೂಟ ಸಹಕಾರಿ ರಚಿಸಲು ಅವಕಾಶವಿರುವುದಿಲ್ಲ. |
ಈ ಕಾಯ್ದೆಯಲ್ಲಿ ಐದು ಅಥವಾ ಹೆಚ್ಚು ಸಹಕಾರಿಗಳು ಸೇರಿ ಒಕ್ಕೂಟ ರಚಿಸಲು ಹಾಗೂ ಚಟುವಟಿಕೆ ನಡೆಸಲು ಅವಕಾಶ ಒದಗಿಸಲಾಗಿದೆ. |