ಗುತ್ತಿಗೆ ಆಧಾರದ ನೇಮಕಾತಿ ಪ್ರಕಟಣೆ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಈ ಸಂಸ್ಥೆಗೆ ಅಗತ್ಯ ಇರುವ ವಿವಿಧ ಹುದ್ದೆಗಳಿಗೆ ಸಲಹೆಗಾರರು ಹಾಗೂ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಯನ್ನು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ-1997 ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಉಪವಿಧಿ ಹಾಗೂ ಸಿಬ್ಬಂದಿ ಸೇವಾ ನಿಯಮಾವಳಿಯ ನೇಮಕಾತಿ ನಿಯಮ ಹಾಗೂ ಆಡಳಿತ ಮಂಡಲಿ ಮತ್ತು ಸಿಬ್ಬಂದಿ ನೇಮಕಾತಿ ಸಮಿತಿಯ ನಿರ್ಣಯದಂತೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ದಿನಾಂಕ 17.06.2026 ರ ಆಡಳಿತ ಮಂಡಳಿ ಸಭೆಯು ಅನುಮೋದಿಸಿದಂತೆ ಸಲಹೆಗಾರರು ಮತ್ತು ಗುತ್ತಿಗೆ ಆಧಾರದ ನೇಮಕಾತಿಗೆ ಪರಿಗಣಿಸಲಾದ ಹುದ್ದೆಗಳ ವಿವರ ಕೆಳಗಿನಂತಿದೆ.